ಇವ್ಳಲಿಲ್ಲ ನಂಗ್ಬೇಕಿದ್ದು, ನನ್ಗ್ ಬೇರೆ ಬೇಕಿತ್ತು!
ಇವಳಲ್ ಏನ್ನಾ ಕಂಡೆ ನಾನು, ಇವಳಲ್ ಎಂತದ್ದಿತ್ತು!
ಸುಂದರವಾದ ಎಂಡ್ರು ಬೇಕು ಅಂತಂತಿದ್ದೆ ಕಣ್ರೀ,
ಎಲ್ಲಾ ಬಿಟ್ಟೂ ಇಂತಾ ಯೆಣ್ಣೆ ನನ್ಗ್ ಸಿಗ್ಬೇಕಿತ್ತೇನ್ರೀ?
ಕೆಟ್ದಾದ್ ಮೂಗು, ದೊಡ್ದಾದ್ ಹಣೆ, ಇವಳಲ್ಲ ಸುಂದರಿ,
ಮೂಗಿನ್-ಮೇಲೆ ಕುಂತೈತ್ನೋಡಿ ಸೋಡಗ್ಲಾಸು ಭಾರಿ!
ಹಾಡ್ ಏಳೊವ್ರು ಬೇಕಂತಿದ್ರೆ, ಇವ್ಳ್-ಈಗ್-ನನ್ ಸಂಸಾರ,
ಹಾಡು ಆಡಕ್ ಬರಕಿಲ್ಲ, ರಾಗವು ಅಪಸ್ವಾರ!
ಪೂಜೆಗೀಜೆ ಮಾಡೊವ್ಳ್ ಬೇಕು ಅಂತಿತ್ತು ನನ್ಗ್ ಇಷ್ಟ,
ಒಂದ್ ಅತ್-ನಿಮೆಷ ಕೂತ್ಕೊಳ್ಳೋದು ಈ ಉಡ್ಗೀಗೆ ಕಷ್ಟ!
ಕೈಯಲ್-ಬಳೆ ಕಾಲಲ್ ಗೆಜ್ಜೆ ಹಾಕ್ಕೊಳೋಳ್ ಬೇಕಿತ್ತು,
ಹಣೆಮೇಲ್ ಕುಂಕುಮವಾದ್ರೂ ನೆಟ್ಟುಗ್ ಹಾಕೊಂಡ್ರೆ ಸಾಕಿತ್ತು!
ಬಳೆಯೂ ಕಷ್ಟ, ಗೆಜ್ಜೆಯನಿಷ್ಟ, ಕುಂಕುಮಬೇಡಂತಾಳೆ,
ಅರ್ಥವಾಗುತ್ತೇನೊ ನೋಡುವ ಈವತ್ತಲ್ಲಾ-ನಾಳೆ!
ಇಂಗೋ-ಎಂಗೋ ಮಾಡ್ಕೊಂಬುಟ್ಟೆ ಮಧುವೆ ಈ ಉಡ್ಗೀನಾ,
ಸುಮ್ನೇ ದಿನಾ ಗೋಳ್-ಉಯ್ಕೊಂಡು ತೆಗಿತಾಳೆ ನನ್ ಪ್ರಾಣಾ!
ನನ್ ಕಾಟಾ ನನ್ಗ್ ಸಾಕಾಗಿತ್ತು, ಇವ್ಳ್ ಬೇರೆ ಈಗ್ ಸಿಕ್ಲು,
ಬೆಳಕಾಗಿದ್-ನನ್ ಜೀವನ ಈಗ್ ಆಗೋಯ್ತ್ ಕಂಪ್ಲೀಟ್ ಕತ್ಲು!
.... ಹಹಹ ....
ಇಷ್ಟೆಲ್ಲಾ ನಾ ಸುಮ್ಕ ಅಂದೆ, ನನ್ ಎಣ್ರುನ್ ರೇಗ್ಸಕ್ಕೆ,
ನನ್ ಪದ್ಯಾನ ನೋಡಿಕೊಂಡು ಒಂದ್ಸಾರಿ ನಾನೇ ನಕ್ಕೆ!
ಇಂತಾ ಒಳ್ಳೆ ಈ ನನ್ನ ಎಂಡ್ರು, ಯಾರಿಗ್ ಸಿಗ್ತಾರ್-ಏಳಿ?
ಆಡು-ಏಳೋವ್ರ್ ಕಟ್ಕೊಂಡ್ ನಾನ್ ಮಾಡ್ಬೇಕಿತ್ತೆ ಕಛೇರಿ?
ಬಳೆ-ಕುಂಕ್ಮಾ ಆಕೊತಾಳೆ, ಗೆಜ್ಜೆಯೊಂದನ್ ಬಿಟ್ರೆ,
ನನ್ಗೆ ಸಂತಸ ತರ್ತಾಳೆ ನಾ ಒಂದು ಮುತ್ತು ಕೊಟ್ರೆ!
ಮುದ್ದಾದ್ ಹುಡ್ಗೀ, ಒಳ್ಳೆ ಮನಸ್ಸು, ಬೇರೆ ಬೇಕಿರ್ರ್ಲಿಲ್ಲ,
ಇವ್ಳ್ ನನ್-ಜೀವ, ಇವ್ಳ್ ನನ್-ಪ್ರಾಣ, ಇವ್ಳೇ ನಂಗೀಗೆಲ್ಲಾ!
ಇಂತಾ ಎಂಡ್ರುನ್ ಕೊಟ್-ಆ-ದೇವ್ರ್ಗೆತ್ಯಾಂಕ್ಸ್ ಎಷ್ಟ್ ಏಳ್ದ್ರೂ ಸಾಲ್ದು,
ಹೆದ್ರುಕೋ ಬೇಡಿ, ಇದೆ ಲಾಶ್ಟ್ ಲೈನ್ ನನ್ ಈ ಡಬ್ಬ ಹಾಡ್ದು :)
